
4th November 2024
ಪೌರ ಕಾರ್ಮಿಕರಿಗೆ ಹಾಗೂ ಸಾರಿಗೆ ನೌಕರರಿಗೆ & ಕರೆಂಟ್ ಲೈನ್ ಮ್ಯಾನ್ ಸಾಮಾನ್ಯ ನೌಕರರಿಗೆ ಮೊದಲ ಆದ್ಯತೆ ನೀಡಿ -ಸರಕಾರಿ ನೌಕರರನ್ನಾಗಿ ಪರಿಗಣಿಸಿ…
ರಾಜ್ಯ ಸರ್ಕಾರಕ್ಕೆ ಮನವಿ – ಮಹೇಶ ಎಸ್ ಶಿಗೀಹಳ್ಳಿ ಸಾಮಾಜಿಕ ಹೋರಾಟಗಾರರು…
ಬೆಳಗಾವಿ : ಬೆಳಗಾವಿ : ಪೌರ ಕಾರ್ಮಿಕರಿಂದ ಇವತ್ತಿಗೆ ನಮ್ಮ ರಾಜ್ಯ ಜಿಲ್ಲೆ ನಗರ ಗ್ರಾಮ ಸ್ವಚ್ಛತೆಯಿಂದ ಕೂಡಿದೆ ಪೌರ ಕಾರ್ಮಿಕರು ಇಲ್ಲದಿದ್ದರೆ ಜನರು ಕಸದಲ್ಲಿ ಓಡಾಡುವ ಪರಸ್ಥಿತಿ ಚರಂಡಿ ವ್ಯವಸ್ಥೆ ಕೂಡ ಮನೆ ಒಳಗೆ ತೆಗೆದುಕೊಳ್ಳುವ ಪರಸ್ಥಿತಿ ಎದುರಾಗುತ್ತಿತ್ತು ದಿನ ನಿತ್ಯದ ಕರ್ಮಗಳನ್ನು ಆಗಿನಿಂದ ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಚರಂಡಿ ಒಳಗಡೆ ಇಳಿದು ಸ್ವಚ್ಛತೆ ಗೊಳಿಸಿ ಜನರಿಗೆ ದೊಡ್ಡ ಕೊಡುಗೆ ನೀಡಿದ್ದಾರೆ.
ಆದರೆ ಪೌರ ಕಾರ್ಮಿಕರಿಗೆ ನೀಡುವ ಗೌರವ ವಿರಳವಾಗಿದೆ ಕಚೇರಿಗಳಲ್ಲಿ ಎಸಿ ಅಳವಡಿಸಿ ಕೂತು ಅದಿಕಾರ ನಡೆಸುವ ಅಧಿಕಾರಿಗಳಿಗೆ ಹೆಚ್ಚಿನ ಸಂಬಳ ರಾಜ್ಯ ಸರಕಾರಿ ನೌಕರರ ಸೌಲಭ್ಯಗಳು ಮುಂಬಡ್ತಿ ಎಲ್ಲವು ನೀಡಿ ಅದೆ ದಿನನಿತ್ಯ ಕಷ್ಟಪಟ್ಟು ತಮ್ಮ ಆರೋಗ್ಯ ಲೆಕ್ಕಿಸದೆ ಸ್ವಚ್ಛತೆ ಕಾಪಾಡುವ ಸಾಮಾನ್ಯ ಪೌರ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ತಿಂಗಳ ಕೊನೆಯ ದಿನ ಸಂಬಳವೂ ಇಲ್ಲ ಹೀಗಾದರೆ ನಮ್ಮ ದೇಶದಲ್ಲಿ ರಾಜ್ಯದಲ್ಲಿ ಪ್ರಜಾಪ್ರಭುತ್ವ ಎಲ್ಲಿ ಬದುಕಿದೆ ಎನ್ನುವ ಪ್ರಶ್ನೆ ಕಾಡುತ್ತಿದೆ.
ನಿಜವಾಗಿಯೂ ಸಾಮಾನ್ಯ ನೌಕರರ ಮೇಲೆ ಕಿಂಚಿತ್ತೂ ಕಾಳಜಿ ಅನ್ನುವುದು ಇದ್ದರೆ ಒಳ ಗುತ್ತಿದೆ ಮತ್ತು ಹೊರ ಗುತ್ತಿದೆ ಪೌರ ಕಾರ್ಮಿಕರನ್ನೂ ಗೌರವಿಸಿ ಸರಕಾರಿ ನೌಕರನ್ನಾಗಿ ಮಾಡಿ.
ಹಾಗೂ ದಿನ ನಿತ್ಯ ಮಳೆ ಇರಲಿ ಬಿರುಗಾಳಿ ಇರಲಿ ವಿದ್ಯುತ್ ಇಲಾಖೆ ಯಲ್ಲಿ ಇರುವ ಸಾಮಾನ್ಯ ಲೈನ್ ಮೆನ್ ಗಳು ತಮ್ಮ ಜೀವ ಕುಟುಂಬವನ್ನು ಲೆಕ್ಕಿಸದೆ ನಿರಂತರವಾಗಿ ಹಬ್ಬ ಹರಿದಿನ ಮಳೆ ಬಿರುಗಾಳಿಯಲ್ಲಿ ಜನ ಸಾಮಾನ್ಯರಿಗೆ ತೊಂದರೆಯಾಗಲು ಬಿಡದೆ ವಿದ್ಯುತ್ ಲೈನ್ ಕಟ್ಟಾದರೆ ಕಂಬದ ಮೇಲೆ ಹತ್ತಿ ಸಮಸ್ಯೆ ಸರಿಪಡಿಸುತ್ತಾರೆ ಆಯಾ ತಪ್ಪಿದರೆ ಅಥವಾ ವಿದ್ಯುತ್ ಶಾಕ್ ಗೆ ಸಿಲುಕಿ ಜೀವ ತ್ಯಾಗ ಮಾಡುತ್ತಾರೆ ಅದಕ್ಕಾಗಿ ವಿದ್ಯುತ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರ ಗುತ್ತಿಗೆ ಒಳ ಗುತ್ತಿದೆ ಸಾಮಾನ್ಯ ನೌಕರರನ್ನು ಗೌರವಿಸಬೇಕು.
ಸಾರಿಗೆ ನೌಕರರು ಕುಟುಂಬವನ್ನು ತೊರೆದು ದಿನನಿತ್ಯ ಕೋಟ್ಯಂತರ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುತ್ತಾರೆ ಅದಕ್ಕಾಗಿ ಸರಕಾರಿ ನೌಕರರ ಸರಿಸಮಾನ ವೇತನ ನೀಡಿ ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ವಿನಂತಿ – ಮಹೇಶ ಎಸ್ ಶಿಗಿಹಳ್ಳಿ.**
ಡಾ,ಬಿ,ಆರ್,ಅಂಬೇಡ್ಕರ ಪ್ರತಿಮೆಗೆ ಸ್ಥಳವಕಾಶಕ್ಕೆ ಸ್ಪಂಧಿಸಿದ ಸಚಿವ ಡಾ,ಮಾಹಾದೇವಪ್ಪವರಿಗೆ ಗೌರವ ಸನ್ಮಾನ!!
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವಾರು ಸಮಾಜಮುಖಿ ಕಾರ್ಯಗಳಾಗಿವೆ: ಯೋಜನಾಧಿಕಾರಿ ಶೇಖರನಾಯ್ಕ ಹೇಳಿಕೆ
ಚಡಚಣ ಸಂಗಮೇಶ್ವರ ಜಾತ್ರೆಯ ಸಂಭ್ರಮ ಬಾನAಗಳದಲ್ಲಿ ಚಿತ್ತಾರ ಬಿಡಿಸಿದ ಪಟಾಕಿಗಳು